ಕರಾವಳಿ ಕರ್ನಾಟಕದ ಸಾಹಿತ್ಯ ಸಾಂಸ್ಕ್ರತಿಕ ಸಮ್ಮೇಳನ ‘ರತ್ನೋತ್ಸವ’ವು ನಾಡು ನುಡಿಯನ್ನು ವೈಭವೀಕರಿಸುವ ಸದುದ್ದೇಶದಿಂದ ಕರಾವಳಿ ಕರ್ನಾಟಕದ ಸಾಹಿತ್ಯ ಸಂಸ್ಕ್ರತಿಯನ್ನು ಜನ ಮಾನಸದಲ್ಲಿ ಅಚ್ಚಾಗುವಂತೆ ಮಾಡಲು ವಿದ್ಯಾರತ್ನ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಶ್ರೀ ಕೆ. ರವೀಂದ್ರ ಶೆಟ್ಟಿಯವರ ನೇತ್ರತ್ವದಲ್ಲಿ ವರ್ಷಂಪ್ರತಿ ನಡೆಸಲಾಗುತ್ತದೆ.
ಪ್ರಸಿದ್ದ ಸಾಹಿತಿಗಳು, ಕವಿಗಳು, ಚಿಂತಕರು, ಧಾರ್ಮಿಕ ಮುಖಂಡರು, ಸಾಮಾಜಿಕ ನೇತಾರರು ಭಾಗವಹಿಸುವ ಈ ಸಮ್ಮೇಳನದಲ್ಲಿ ಸಾಹಿತ್ಯಗೋಷ್ಠಿ, ವಿಚಾರಗೋಷ್ಠಿ, ಕವಿಗೋಷ್ಠಿ, ಹಾಸ್ಯಲಹರಿ, ಯಕ್ಷಗಾನ, ಜಾನಪದ ಸೊಗಡನ್ನು ಬಿಂಭಿಸುವ ವಿವಿಧ ಸಾಹಿತ್ಯ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಅಲ್ಲದೆ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿದ ಗಣ್ಯರನ್ನು ಸಂಸ್ಥೆಯ ಪ್ರತಿಷ್ಟಿತ ‘ವಿದ್ಯಾರತ್ನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುವುದು.
ಸಂಸ್ಥೆಯು ಈವರೆಗೆ(2015) ಈ ಕೆಳಗಿನ ಗಣ್ಯರನ್ನು ‘ವಿದ್ಯಾರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ:
2010ಭಾಸ್ಕರ ರೈ ಕುಕ್ಕುವಲ್ಲಿ (ಕವಿ, ಸಾಹಿತಿ, ಯಕ್ಷಗಾನ ಅರ್ಥಧಾರಿ)
2011ಗುರುಕಿರಣ್ (ಖ್ಯಾತ ಸಂಗೀತ ನಿರ್ದೇಶಕ)
2012ಡಾ| ಬಿ. ಎಮ್. ಹೆಗ್ಡೆ (ವೈದ್ಯಕ್ಯೀಯ ಕ್ಷೇತ್ರ)
2013ಪಾಲ್ತಡಿ ರಾಮಕೃಷ್ಣ ಆಚಾರಿ (ಜನಪದ ವಿದ್ವಾಂಸ)
2014ನಾಡೋಜ ಕಯ್ಯಾರ ಕಿಞ್ಞಣ್ಣ ರೈ (ಕವಿ )
2015ಪ್ರೋ| ಅಮೃತ ಸೋಮೇಶ್ವರ, (ಸಾಹಿತಿ, ಪ್ರಸಂಗಕರ್ತರು)